
ಸಿನಿಮಾ ಎಂಬ ನನ್ನ ನೆಚ್ಚಿನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬುದು ಬಾಲ್ಯಾದಿಂದ ಹುಟ್ಟಿಕೊಂಡಿರುವ ಕನಸು. ಆದರೆ ಇಷ್ಟು ಸಮಯದಲ್ಲಿ ಒಮ್ಮೆ ಕೂಡ ಪರದೆಯ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶ ಯಾರನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶ ಮಾಡಿಕೊಳ್ಳಬೇಕು ಅದು ನಾನು ಮಾಡಿಲ್ಲ ಅಂದುಕೊಳ್ತೇನೆ. ಆದ್ರೆ ಈಗ ಸಿನಿಮಾ ಕ್ಷೇತ್ರವನ್ನು ಸೇರಬೇಕು ಎಂಬ ಆಸೆಗೆ ಅದರ ಮೇಲೆ ಕೃಷಿ ಮಾಡುತ್ತಾ Film making ವಿದ್ಯಾರ್ಥಿಯಾಗಿದ್ದೇನೆ. ಶಾಲಾ ದಿನಗಳಿಂದ ರಂಗಭೂಮಿಯ ಪರಿಚಯ ಇರುವ ನನಗೆ ನಟನೆ ಹೊಸದೇನಲ್ಲ. ಆದರೆ ಒಬ್ಬ ನಟನಿಗಿರುವ ಹಾಗೂ ಇರಬೇಕಾದ ಎಲ್ಲಾ ಕೌಶಲ್ಯಗಳನ್ನು ಕಲಿಯಬೇಕೆಂದು ಪರಿಭ್ರಮಿಸುತ್ತಿದ್ದೇನೆ.ಹಾಗಾಗಿ ನನ್ನ ಆಸಕ್ತಿಯ ಹಾಗೂ ನನ್ನ ನೆಚ್ಚಿನ ವಿಷಯಗಳನ್ನು ಒಂದೆಡೆ ಕ್ರೋಢೀಕರಿಸುವ ಸಣ್ಣ ಪ್ರಯತ್ನ ಇದಾಗಿದೆ.
Leave a comment